71 ನೇ ಸ್ವಾತಂತ್ರ್ಯ ದಿನಾಚರಣೆ

71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ಬಂಟ್ಸ್ ಹಾಸ್ಟೆಲಿನಲ್ಲಿ ವಿಜ್ರ್ರಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾದ ಶ್ರೀಯುತ ಕರ್ನಲ್ ನಿಟ್ಟೆಗುತ್ತು ಶರತ್ ಭಂಢಾರಿಯವರು ಧ್ವಜಾರೋಹಣವನ್ನು ನಡೆಸಿ ಗೌರವ ರಕ್ಷೆ ಸ್ವೀಕರಿಸಿದರು. ವಿದ್ಯಾರ್ಥಿಗಳಿಗೆ ದೇಶಭಕ್ತಿ ಹಾಗೂ ಪರಿಸರ ಕಾಳಜಿಯನ್ನು ಜಾಗೃತಗೊಳಿಸಲು ಕರೆಯನ್ನಿತ್ತರು. ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿ ಶ್ರೀ ವಸಂತ ಶೆಟ್ಟಿ, ಕೋಶಾಧಿಕಾರಿ ಶ್ರೀ ರವೀಂದ್ರನಾಥ ಶೆಟ್ಟಿ, ತಾಲೂಕು ಸಮಿತಿಯ ಸಂಚಾಲಕ ಶ್ರೀ ಜಯರಾಮ ಸಾಂತ, ಮತ್ತು ಎಲ್ಲಾ ವಿದ್ಯಾಸಂಸ್ಥೆಗಳ ಮುಖ್ಯಸ್ಠರು ಹಾಜರಿದ್ದರು. ನಂತರ ಎಲ್ಲರಿಗೂ ಸಿಹಿ ತಿಂಡಿಯನ್ನು ಹಂಚಲಾಯಿತು.