ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಪ್ರತಿಭೆ

ಮಂಗಳೂರಿನ ಈಜು ಪ್ರತಿಭೆ ಕುಮಾರಿ ಯಸ್.ಆರ್.ರಚನಾ ರಾವ್ ಪ್ರಸ್ತುತ ರಾಮಕೃಷ್ಣ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ.ಇವಳು ಮಂಗಳೂರಿನ ಯಸ್.ರಾಧಕೃಷ್ಣ ರಾವ್ ಹಾಗೂ ಶ್ರೀಮತಿ ಸುಮಿತ್ರ ರಾವ್ ಇವರ ಸುಪುತ್ರಿ. ಐದು ವರ್ಷ ಇರುವಾಗಲೇ ಮೊದಲ ಬಾರಿಗೆ ಚಿನ್ನ ಹಾಗೂ ಬೆಳ್ಳಿ ಪದಕ ತನ್ನದಾಗಿಸಿಕೊಂಡು ಈಗಾಗಲೇ ನೂರಕ್ಕಿಂತ ಹೆಚ್ಚು ಪದಕವನ್ನು ಮಡಿಲಿಗೆರಿಸಿಕೊಂಡಿದ್ದಾಳೆ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಮಂಗಳೂರಿನ “ಹೆಮ್ಮೆಯ ಪುತ್ರಿ” ಎನಿಸಿಕೊಂಡಿದ್ದಾಳೆ. ರಾಜ್ಯ ಮಟ್ಟದಲ್ಲಿ ಹಲವಾರು ಪದಕಗಳನ್ನು ತನ್ನದಾಗಿಸಿ ಕೊಂಡದ್ದಲ್ಲದೆ 50 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಎರಡು ಬಾರಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾಳೆ. ಅಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ದೆಯಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾಳೆ ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ (S.F.I) ದವರು ನಡೆಸಿದ 2017 ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ 3 ಚಿನ್ನ ಹಾಗೂ S.F.I ನವರೇ ನಡೆಸಿದ ರಾಷ್ಟ್ರಮಟ್ಟದ ಈಜು ಸ್ಪರ್ಧೆ (ಜುಲೈ 2017 )ಯಲ್ಲಿ ರಚನಾ ರಾವ್ ಒಳಗೊಂಡ ಕರ್ನಾಟಕ ತಂಡ (medly relay)ಹೊಸ ದಾಖಲೆ ನಿರ್ಮಿಸಿರುವುದರೊಂದಿಗೆ ಚಿನ್ನದ ಪದಕ ಪಡೆದಳು. ಅಲ್ಲದೆ ರಾಷ್ಟ್ರಮಟ್ಟದ ವೈಯಕ್ತಿಕ ಸ್ಪರ್ಧೆ(ಬ್ರೆಸ್ಟ್ ಸ್ಟ್ರೋಕ್) ಯಲ್ಲಿ 1 ಬೆಳ್ಳಿ , 2 ಕಂಚು ತನ್ನದಾಗಿಸಿಕೊಂಡಿದ್ದಾಳೆ. ಖೇಲೋ ಇಂಡಿಯಾದಲ್ಲೂ ಸ್ಪರ್ಧಿಸಿ ಪದಕಗಳನ್ನು ಪಡೆದಿದ್ದಾಳೆ.

ಸಾರ್ವಜನಿಕ ಶಿಕ್ಷಣ ಇಲಾಖೆಯವರು ಆಗಸ್ಟ್ 18 2017 ರಂದು ನಡೆಸಿದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ 50ಮೀ . ಬ್ರೆಸ್ಟ್‍ಸ್ಟ್ರೋಕ್ , 100ಮೀ ಹಾಗೂ 200ಮೀ ಬ್ರೆಸ್ಟ್‍ಸ್ಟ್ರೋಕ್‍ನಲ್ಲಿ 3 ಚಿನ್ನದ ಪದಕ ಮತ್ತು 10-9-2017 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ 5 ಚಿನ್ನದ ಪದಕ , 1 ಬೆಳ್ಳಿ ಪದಕ ಹಾಗೂ ಹಾಸನದಲ್ಲಿ ನಡೆದ ವಿಭಾಗ ಮಟ್ಟದ ಕ್ರೀಡಾ ಕೂಟದಲ್ಲಿ 5 ಚಿನ್ನದ ಪದಕ 1 ಬೆಳ್ಳಿ ಪದಕ ಪಡೆದುಕೊಂಡಿದ್ದಾಳೆ.

ಮಂಗಳೂರು ನಗರ ಪಾಲಿಕೆಯ ಈಜಿ ಕೊಳದಲ್ಲಿ ಮಂಗಳಾ ಸ್ವಿಮ್ಮಿಂಗ್ ಕ್ಲಬ್ ನ ಸದಸ್ಯೆಯಾಗಿ ಮೊದಲು ಶ್ರೀ ರವೀಶ್, ಈಗ ಲೋಕರಾಜ್ ವಿಟ್ಲ ಇವರಿಂದ ತರಬೇತು ಪಡೆಯುತ್ತಿದ್ದಾಳೆ. ತನ್ನ ಈಜು ಪ್ರತಿಭೆಯನ್ನು ತೋರಿಸಿ ಹಲವಾರು ಬಾರಿ ಚಿನ್ನದ ಪದಕಕ್ಕೆ ತನ್ನ ಕೊರಳೋಡ್ಡಿದ್ದಾಳೆ. ಇಷ್ಟೇ ಅಲ್ಲದೆ 2015,2016,2017 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯವರ ಕ್ರೀಡಾ ಭಾರತೀಯ ಪ್ರತಿಭಾ ಪುರಸ್ಕಾರ, ರೋಟರಿ ಕ್ಲಬ್, ಮಂಗಳೂರಿನ "Young Achiever" ಎಂಬ ಬಿರುದು ಈಶ್ವರಿಯ ಬ್ರಹ್ಮಕುಮಾರಿ ಇವರಿಂದ ಪ್ರತಿಭಾ ಪುರಸ್ಕಾರ ಪಡೆದುಕೊಂಡಿದ್ದಾಳೆ.

ಕುಮಾರಿ ರಚನಾ ಕೇವಲ ತನ್ನ ಪ್ರತಿಭೆಯನ್ನು ಈಜಿಗೆ ಮಾತ್ರ ಸಿಮೀತ ಇಡದೆ ಶೈಕ್ಷಣಿಕ ಕ್ಷೇೀತ್ರದಲ್ಲೂ ಸೈ ಎನಿಸಿಕೊಂಡ ನಮ್ಮ ಶಾಲೆಯ ಹೆಮ್ಮೆಯ ವಿಧ್ಯಾರ್ಥಿನಿ ಕುಮಾರಿ ರಚನಾ ಅವಳ ಮುಂದಿನ ಕ್ರೀಡಾ ಹಾಗೂ ಶೈಕ್ಷಣಿಕ ಭವಿಷ್ಯ ಉಜ್ಜಲವಾಗಲಿ ಎಂದು ಹಾರೈಸೋಣ.