ಈಜು ಪಟು ಕುಮಾರಿ ಸಾನ್ಯ ಡಿ ಶೆಟ್ಟಿ

ಕುಮಾರಿ ಸಾನ್ಯ ಡಿ ಶೆಟ್ಟಿ ಶ್ರೀ.ದನಂಜಯ ಆರ್ ಶೆಟ್ಟಿ ಮತ್ತು ಗಾಯತ್ರಿ ಡಿ.ಶೆಟ್ಟಿ ಇವರ ಪುತ್ರಿ .ಇವಳು 9ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ತನ್ನ4ನೇ ವಯಸ್ಸಿನಿಂದ ಈಜು ತರಬೇತಿಯನ್ನು ಮಂಗಳಾ ಸ್ವಿಮ್ಮಿಂಗ್ ಕ್ಲಬ್‍ನ ಶ್ರೀ ರವೀಶ್ ವಿ.ರಾವ್ ಇವರಿಂದ ಆರಂಭಿಸಿ ಸುಮಾರು 120ಕ್ಕೂ ಹೆಚ್ಚು ಚಿನ್ನದ ಪದಕ, 40ಕ್ಕೂ ಹೆಚ್ಚು ಬೆಳ್ಳಿಯ ಪದಕ ಹಾಗೂ 30 ಕ್ಕೂ ಹೆಚ್ಚಿನ ಕಂಚಿನ ಪದಕಗಳನ್ನು ಪಡೆದಿರುತ್ತಾಳೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆಯುವ ಜಿಲ್ಲಾಮಟ್ಟದ ಈಜುಸ್ಪರ್ಧೆಯ 14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಜಯಿಸಿ 4 ಬಾರಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಸತತ 3 ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಹಲವಾರು ಪದಕಗಳನ್ನು ಪಡೆದಿರುತ್ತಾಳೆ.

2016 ರ ದಸರಾ ಕ್ರೀಡಾಕೂಟದ ಮುಕ್ತವಿಭಾಗದ ಮಹಿಳೆಯರ ಈಜು ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ 1 ಬೆಳ್ಳಿ ಹಾಗೂ 1 ಕಂಚಿನ ಪದಕಗಳನ್ನು ಪಡೆದಿರುತ್ತಾಳೆ. 50 ಮೀ ಬಟರ್ ಪ್ಲೈ ವಿಭಾಗದಲ್ಲಿ ಬೆಳ್ಳಿಪದಕ, 50ಮೀಟರ್ ಬ್ರೆಸ್ಟ್‍ಸ್ಟ್ರೋಕ್‍ನಲ್ಲಿ ಹಾಗೂ 4*50 ಮೀಟರ್ ಮಿಕ್ಸೆಡ್ ರಿಲೇಯಲ್ಲಿ ಬೆಳ್ಳಿಪದಕವನ್ನು ಪಡೆದು 14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವು ಸಮಗ್ರ ರನ್ನರ್‍ಅಫ್ ಪ್ರಶಸ್ತಿ ಪಡೆದಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ದ.ಕ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಕು.ಸಾನ್ಯ ಡಿ ಶೆಟ್ಟಿ 17 ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ 3 ಚಿನ್ನದ ಪದಕ ಪಡೆದು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಪ್ರಸುತ್ತ ಈಜು ತರಬೇತಿಯನ್ನು ಮಂಗಳಾ ಸ್ವಿಮ್ಮಿಂಗ್ ಕ್ಲಬ್‍ನ ಮುಖ್ಯ ತರಬೇತುದಾರರಾದ ಶ್ರೀ ಲೋಕರಾಜ್ ವಿ.ಎಸ್. ಮತ್ತು ಇವರ ತಂಡದಿಂದ ಪಡೆಯುತ್ತಿದ್ದಾಳೆ. ಇವಳ ಸಾಧನೆಯ ಹಿಂದೆ ಶಾಲೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕ ವೃಂದದವರು ಹಾಗೂ ಮಂಗಳಾ ಸ್ವಿಮ್ಮಿಂಗ್ ಕ್ಲಬ್‍ನ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಬೆನ್ನೆಲುಬಾಗಿ ನಿಂತಿದ್ದಾರೆ.

ನಮ್ಮ ಹೆಮ್ಮೆಯ ಈಜು ಪಟು ಕುಮಾರಿ ಸಾನ್ಯ ಡಿ ಶೆಟ್ಟಿ ಇವಳ ಕ್ರೀಡಾ ಭವಿಷ್ಯ ಉಜ್ಜಲವಾಗಲಿ ಎಂದು ಹಾರೈಸುತ್ತೇವೆ.