ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮ

ಶ್ರೀ ರಾಮಕೃಷ್ಣ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮ 27-03-2017 ರಂದು ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿಪೆÇ್ಪಕ್ಯಾಂಪಸ್ ಕಲಿಕಾ ಕೇಂದ್ರಗಳ ನಿರ್ದೇಶಕಿ ಶ್ರೀಮತಿ ಚಿತ್ರಾ ರಾವ್ ಹಿಪೆÇ್ಪಕ್ಯಾಂಪಸ್ ಚಟುವಟಿಕೆ ಆಧಾರಿತ ಶಿಕ್ಷಣ ಪದ್ದತಿಯ ಪ್ರಾಮುಖ್ಯತೆಯ ಕುರಿತು ತಿಳಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅಭಿನಂದಿಸಿದರು. ಶಾಲಾ ಸಂಚಾಲಕರಾದ ಶ್ರೀಯುತ ಕೃಷ್ಣಪ್ರಸಾದ ರೈಯವರು ಪುಟಾಣಿಗಳಿಗೆ ಹಿತವಚನ ನೀಡಿದರು. ಹಿಪೆÇ್ಪಕ್ಯಾಂಪಸ್ ಸಂಸ್ಠೆಯ ಕ್ಲಸ್ಟರ್ ಪ್ರಬಂಧಕಿ ಶ್ರೀಮತಿ ಶೋಭ ಪೈ ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀಯುತ ಯತಿರಾಜ್ ಶೆಟ್ಟಿ, ಉಪಾಧ್ಯಕ್ಷೆ ಶ್ರೀಮತಿ ಸುಚಿತ್ರರವರು ಸಮಾರಂಭದಲ್ಲಿ ಉಪಸ್ಠಿತರಿದ್ದರು. ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳು ವಿವಿಧ ಮನೋರಂಜನಾ ಕಾರ್ಯಕ್ರಮ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಷಾ.ಎಸ್.ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಭಾನುರೇಖ.ವೈ.ಶೆಟ್ಟಿ ಕಾರ್ಯಕ್ರಮನಿರ್ವಹಿಸಿದರು. ಶ್ರೀಮತಿ ಸ್ಮಿತಾ ರಾವ್ ವರದಿ ವಾಚಿಸಿದರು. ಶ್ರೀಮತಿ ಪುಷ್ಪಲತಾ ವಂದನಾರ್ಪಣೆಗೈದರು.