ರೆಡ್ ಡೇ

ಶ್ರೀ ರಾಮಕೃಷ್ಣ ನರ್ಸರಿ ಶಾಲೆಯ ಮಕ್ಕಳಿಂದ ಇತ್ತೀಚೆಗೆ ರೆಡ್ ಡೇಯನ್ನು ಆಚರಿಸಲಾಯಿತು. ಕೆಂಪು ಬಣ್ಣದ ಮಹತ್ವವನ್ನು ಅರಿಯಲು ಮಕ್ಕಳು ಬಹಳ ಉತ್ಸುಕತೆಯಿಂದ ಪಾಲ್ಗೊಂಡಿದ್ದರು.ಕೆಂಪು ಉಡುಗೆಯನ್ನು ಧರಿಸಿ ಕೆಂಪು ಬಣ್ಣದ ತಿಂಡಿಗಳನ್ನು ಸವಿದು ಸಂಭ್ರಮಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಷಾ.ಎಸ್.ಶೆಟ್ಟಿ ,ನರ್ಸರಿ ಅಧ್ಯಾಪಕಿಯರಾದ ಶ್ರೀಮತಿ ಭಾನುರೇಖ ಶೆಟ್ಟಿ , ಶ್ರೀಮತಿ ಪುಷ್ಪಲತ ಹಾಗೂ ಶ್ರೀಮತಿ ಸ್ಮಿತಾ ರಾವ್ ಮಕ್ಕಳ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.